ಬದಿಯಡ್ಕ: ಸಿಡಿಲು, ಮಳೆಯನ್ನು ಲೆಕ್ಕಿಸದೆ ಬದಿಯಡ್ಕ ಪೇಟೆಯಲ್ಲಿ ಬಿಜೆಪಿ ಕಾಸರಗೋಡು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಶ್ವಿನಿ ಎಂ.ಎಲ್ ಅವರ ರೋಡ್ ಶೋ ಗಮನ ಸೆಳೆಯಿತು. ನೂರಾರು ಕಾರ್ಯಕರ್ತರು, ತಾಯಂದಿರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬದಿಯಡ್ಕ ಬೋಳುಕಟ್ಟೆ ಮೈದಾನದಿಂದ ರೋಡ್ ಶೋ ಆರಂಭಗೊಳ್ಳುತ್ತಿರುವಂತೆಯೇ ಭಾರೀ ಸಿಡಿಲು ಹಾಗೂ ಮಳೆ ಆರಂಭಗೊಂಡಿತು.ಇದನ್ನು ಲೆಕ್ಕಿಸದೆ ರೋಡ್ ಶೋ ಮುಂದುವರಿಯಿತು.
ಬಿಜೆಪಿಯು ರಾಜ್ಯದಲ್ಲಿ ಪ್ರಬಲ ಶಕ್ತಿಯಾಗಲಿದೆ: ತೇಜಸ್ವೀ ಸೂರ್ಯ MP
ತಿರುವನಂತಪುರಂ ಕಾರ್ಪರೇಶನ್ ಗೆಲುವು ಬಿಜೆಪಿಯ ಮೊದಲ ಹೆಜ್ಜೆಯಾಗಿದೆ. ಈ ಚುನಾವಣೆಯಲ್ಲಿ ಕೇರಳದ ಮತದಾರರು ಎಡ, ಬಲ ರಂಗಗಳಿಗೆ ಪಾಠ ಕಲಿಸಲಿದ್ದು ಪಕ್ಷವು ಪ್ರಬಲ ಶಕ್ತಿಯಾಗಿ ಮೂಡಿ ಬರಲಿದೆ ಎಂದು ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವೀ ಸೂರ್ಯ ಹೇಳಿದರು. ಅವರು ಬದಿಯಡ್ಕದಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಅಶ್ವಿನಿ ಎಂ.ಎಲ್ ಅವರ ರೋಡ್ ಶೋ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಾಸರಗೋಡು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಅಲ್ಲದೆ ಇನ್ಯಾವುದೇ ಅಭಿವೃದ್ಧಿ ನಡೆದಿಲ್ಲ.
ಅಶ್ವಿನಿ ಎಂ.ಎಲ್ ಅವರನ್ನು ವಿಧಾನಸಭೆಗೆ ಆಯ್ಕೆ ಮಾಡಿದ್ದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಕೇರಳದಲ್ಲಿ ಜಾರಿಗೊಳಿಸಲಾಗುವುದು ಎಂದವರು ಹೇಳಿದರು.
ಎಡನೀರು ಮಠಾಧಿಪತಿ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಗಳನ್ನು ಬೇಟಿಯಾಗಿ ಆಶೀರ್ವಾದ ಪಡೆದ ನಂತರ ತೇಜಸ್ವೀ ಸೂರ್ಯ ಬದಿಯಡ್ಕಕ್ಕೆ ಆಗಮಿಸಿದ್ದರು. ಬಿಜೆಪಿ ಅಭ್ಯರ್ಥಿ ಅಶ್ವಿನಿ ಎಂ.ಎಲ್ ಎನ್.ಡಿ.ಎ ಸಂಚಾಲಕ ರವೀಶ ತಂತ್ರಿ ಕುಂಟಾರು, ಸುದಾಮ ಗೋಸಾಡ, ಪಿ.ಆರ್.ಸುನಿಲ್, ಸವಿತ ಟೀಚರ್, ಪ್ರಮಿಳಾ ಮಜಲ್, ಪುಷ್ಪಾ ಗೋಪಾಲನ್, ವೀಣಾ ಅರುಣ್ ಶೆಟ್ಟಿ, ಗೋಪಾಲಕೃಷ್ಣ ಎಂ, ಗುರುಪ್ರಸಾದ್ ಪ್ರಭು, ರವೀಂದ್ರ ರೈ ಗೋಸಾಡ, ಶ್ರೀಧರ ಬೆಳ್ಳೂರು, ಅಶ್ವಿನ್ ಕೊಲ್ಲಾಲಯಿಲ್, ಅಡ್ವ.ಎಚ್.ಎನ್.ಧನುಷ್, ಉದನೇಶ್ವರ ಬದಿಯಡ್ಕ, ಮಹೇಶ್ ವಳಕುಂಜ, ಶಂಕರ ಡಿ, ಅಶ್ವಿನಿ ಕೆ.ಎಂ, ರಜನಿ ಸಂದೀಪ್ ಸಹಿತ ಹಲವರು ಮೊದಲಾದವರು ರೋಡ್ ಶೋ ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿದರು.

